ಲೂಸಿಯಾ ....
ಎಲ್ಲರಿಗೂ ಲೂಸಿಯ ಮೇನಿಯ ಇರುವ ಹಾಗೆ ನನಗೂ ಕೂಡ ಇದ್ಧಿತ್ತು .ಹಾಗಾಗಿ ಈಗಷ್ಟೇ ಲೂಸಿಯಾ ಮಾತ್ರೆಯನ್ನು ಉತ್ತರಹಳ್ಳಿಯಲ್ಲಿ ಇರುವ ವೈಭವಿ talkies ಅಲ್ಲಿ 70 ರೂಪಾಯಿ ಕೊಟ್ಟು ಖರೀದಿಸಿ ಅದನ್ನು ನುಂಗಿ ಎರಡು ಘಂಟೆ ಹೊತ್ತು ಕನಸಿನ ಲೋಕಕ್ಕೆ ಹೋಗಿ ಸಂಭ್ರಮಿಸಿ ಬಂದೆ . ವಾಹ್ !!! ವಾಹ್ !!!.
ಪವನ್ ಕಟ್ಟಿ ಕೊಟ್ಟ ಆ ಕನಸಿನ ಲೋಕದ ಬಣ್ಣಗಳ ಜೊತೆ ಆಟ ಆಡಿ ಬಂದೆ . ಒಂದು ಕಥೆಯನ್ನು ಇಷ್ಟೊಂದು ಮಾರ್ಪಾಟು ಮಾಡಿ ಪ್ರೇಕ್ಷಕರು ತಮ್ಮ ತಲೆಗೆ ಕೆಲಸ ಕೊಟ್ಟು ಚಿತ್ರ ಮುಗಿದ ನಂತರ "ಮಗಾ .. ಅದು ಹಾಗಲ್ಲ... ಹೀಗೆ ಕಣೋ " ಅಂತ ಚಿತ್ರದ ಕುರಿತು ಮಾತನಾಡುವ ಹಾಗೆ ಕಥೆಯನ್ನು ಹೆಣೆದ ಪವನ್ ಅವರಿಗೆ ತುಂಬಾ ಧನ್ಯವಾದಗಳು . ಇಂಥಹ ಮೆದುಳು ಕಲಕುವ ಲೂಸಿಯಾ ಚಿತ್ರದ ಬಗ್ಗೆ ನನ್ನ ಅಭಿಪ್ರಾಯ ಈ ನನ್ನ ಬ್ಲಾಗಿನಲ್ಲಿ ಬರೆಯೋಣ ಅಂತ ಅನ್ನಿಸಿದೆ .
ಲೂಸಿಯ ಅನ್ನೋ ಪದವನ್ನು ಒಂದು ನಿದ್ರಾ ಸಮ್ಮೋಹಿನಿ ಮಾತ್ರೆಗೆ ಇಟ್ಟು ಅದರ ಸುತ್ತಲೂ ಪಾತ್ರಗಳನ್ನು ಸುತ್ತುವಂತೆ ಮಾಡಿ ಪ್ರತೀ ದ್ರಶ್ಯಗಳನ್ನು ಪ್ರೇಕ್ಷಕ ಅತೀ ಆಸಕ್ತಿಯಿಂದ ನೋಡುವ ಹಾಗೆ ಬಹಳ ಬುದ್ದಿವಂತಿಕೆಯಿಂದ ಚಿತ್ರಕತೆ ರಚಿಸಿದಿದ್ದಾರೆ ಈ ನಮ್ಮ ಪವನ್ . ಸಾಮಾನ್ಯ ಮನುಷ್ಯ ಹಾಗೂ ಸಿನಿಮಾ ನಾಯಕನ ನಡುವೆ ಲೂಸಿಯ ಎಂಬ ನಿದ್ರಾ ಮಾತ್ರೆ ಪದರವಾಗಿ ಕಾಣುತ್ತದೆ . ಆರಂಭಧಲಿ ನಾವು ಕತೆಯ ಬಗ್ಗೆ ಏನು ಊಹೆ ಇಟ್ಟುಕೊಂಡಿರುತ್ತೆವೆಯೋ ಅದು ಕ್ಷಣಾರ್ಧದಲ್ಲಿ ಉಲ್ಟಾ ಹೊಡೆಯುತ್ತದೆ .. ಈ ಚಿತ್ರದಲ್ಲಿ ಹೆಣೆದಿರುವ ಚಿತ್ರಕತೆ ಹಾಗೂ ಬಣ್ಣಗಳ ನಡುವಿನ ಆಟ ತುಂಬಾ ಮುದ ನೀಡುತ್ತದೆ .. ಉಳಿದಂತೆ ಎಲ್ಲಾ ಪಾತ್ರಧಾರಿಗಳು ತಮಗೆ ಕೊಟ್ಟ ಪಾತ್ರಗಳನ್ನು ಅನುಭವಿಸಿ ನಟಿಸಿದ್ದಾರೆ .ಈ ಚಿತ್ರದಲ್ಲಿ ನನಗೆ ಒಂದು ದೃಶ್ಯ ಮಾತ್ರ ಅಸಾಮಾನ್ಯವಾಗಿ ಕಂಡಿತು . ಅದು ಯಾವುದೆಂದರೆ ,ಚಿತ್ರವು ಕೊನೆಗೊಳ್ಳುವ ಹೊತ್ತಿನಲ್ಲಿ ಸಾಮಾನ್ಯ ಮನುಷ್ಯ ಹಾಗು ಸಿನಿಮಾ ನಟ ತಮ್ಮ ತಮ್ಮ ಕನಸಿನ ಪದರದ ಸುತ್ತ ಬಣ್ಣಗಳ ಜೊತೆ ಸುತ್ತುವ ದೃಶ್ಯ ಉತ್ತಮದರಲ್ಲಿ ಉತ್ತಮ. ಚಿತ್ರದ ಅತ್ಯುತ್ತಮ ತಿರುವು ಏನೆಂದರೆ ಕನಸು ಕಾಣುತ್ತಿದ್ದದ್ದು ಯಾರು ಎಂದು . ಅದು ಸಾಮಾನ್ಯ ಮನುಷ್ಯನಾ? ಇಲ್ಲ ಆ ಸಿನಿಮಾ ನಟನಾ? . ಹಾಗೆಯೇ , ಚಿತ್ರದ ಕೊನೆಯ ದೃಶ್ಯ ಹೆಚ್ಚಿನವರಿಗೆ ಅರ್ಥ ಆಗಲಿಕ್ಕಿಲ್ಲ. ಆದರೆ ಚಿತ್ರವನ್ನು ಕೂಲಂಕುಷವಾಗಿ ನೋಡುವವರಿಗೆ ಇದು ಅರ್ಥವಾಗುತ್ತದೆ.
ಒಂದು ಸಾಮಾನ್ಯ ಕತೆಯನ್ನು ಅಸಾಮಾನ್ಯವಾಗಿ ಕಟ್ಟಿ ಕೊಡಲು ಒಬ್ಬ ಅಸಾಮಾನ್ಯ story teller ನಿಂದಲೇ ಸಾಧ್ಯ . ಅದು ನಮ್ಮ ಪವನ್ ಅವರ ತಾಕತ್ತು .
ಈ ಚಿತ್ರ ಹೇಗೆ ಅತ್ಯುತ್ತಮವೋ ಹಾಗೆ ಅಲ್ಲಲ್ಲಿ ದೋಷಗಳೂ ಇವೆ. ಈ ಚಿತ್ರದಲ್ಲಿ ನಮ್ಮ ಪವನ್ ಕೂಡ ಚಿಕ್ಕ ಪಾತ್ರ ಮಾಡಿದ್ಧಾರೆ . ಅವರು ಸಂಭಾಷಣೆಗಳು ಇಂಗ್ಲಿಷ್ನಲ್ಲೇ ಇಧೆ. ಆದರೆ subtitle ಕನ್ನಡದಲ್ಲಿ ಇದೆ. ಆದರೆ ಉಳಿದ ಪಾತ್ರಧಾರಿಗಳು ಇಂಗ್ಲಿಷ್ ಅಲ್ಲಿ ಉದ್ದುದ್ದ ಸಂಭಾಷಣೆಗಳನ್ನು ಹೇಳುತ್ತಿದ್ದರೂ ಅದರ subtitle ಇಂಗ್ಲಿಷ್ ಅಲ್ಲೇ ಇದೆ . ಅದು ಯಾಕೆ ?... ಒಂದು ಬೇಸರದ ಸಂಗತಿಯೆಂದರೆ ಚಿತ್ರದ ಟೈಟಲ್ ಕಾರ್ಡ್ ಸಂಪೂರ್ಣವಾಗಿ ಇಂಗ್ಲಿಷ್ಮಯ ಆಗಿರುವುದು . ನೀವು ಇಂಗ್ಲಿಷ್ ಜೊತೆ ಕನ್ನಡವನ್ನೂ ಸೇರಿಸಬಹುದಿತ್ತಲ್ಲ .. :(
ಕೊನೆಯದಾಗಿ , ಲೂಸಿಯಾ ಅನ್ನೋ ಹೊಸ ತರದ ಚಿತ್ರ ನನ್ನನ್ನು ಸಂಪೂರ್ಣವಾಗಿ ಮೋಡಿ ಮಾಡಿದ್ದು ನಿಜ. ಈ ಚಿತ್ರವನ್ನು ಇನ್ನೊಮ್ಮೆ ನೋಡುವ ಆಸೆ ಇದೆ ..ಇದರ ಅರ್ಥ ನನಗೆ ಲೂಸಿಯ ಅರ್ಥ ಆಗಿಲ್ಲ ಅಂತ ಅಲ್ಲ... ಚಿತ್ರದ ಚಿತ್ರಕತೆ ಹಾಗೂ ಬಣ್ಣಗಳ ಲೋಕದ ಜೊತೆ ಚಿತ್ರ ಕೊಡುವ ಸುಂದರ ಕನಸುಗಳನ್ನು ಇನ್ನೊಮೆ ಅನುಭವಿಸುವುದಕ್ಕಾಗಿ ..:) ಯಾರ್ಯಾರು ಈ ಚಿತ್ರವನ್ನು ನೋಡಿಲ್ಲವೋ ಒಮ್ಮೆ ನೋಡಿ ..ಲೂಸಿಯ ನಿಮ್ಮನ್ನು adict ಆಗೋ ಹಾಗೆ ಮಾಡಬಹುದು ..

No comments:
Post a Comment